ನೆಚ್ಚಿನ ಉತ್ತರಗಳು ಮತ್ತು ಪ್ರಶ್ನೆಗಳು
Translations:
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
- ಜಲಾನಯನವೆಂದರೇನು?
ಜಲಾನಯನವೆಂದರೆ ಒಂದು ಭೂ ಪ್ರದೇಶದ ಮೇಲ್ಮೈ ಹಾಗೂ ಒಳ ಪದರಗಳ ನೀರು ಒಂದು ಸಾಮಾನ್ಯ ಸ್ಥಳವಾದಂತ ಹಳ್ಳ, ನದಿ, ಕೊಳ ಅಥವಾ ಜಲ ಸಂಗ್ರಹಾಗಾರಕ್ಕೆ ಬಸಿಯುವುದು. ಜಲಾನಯನ ಪ್ರದೇಶದ ವಿಸ್ತಾರವು ಕೆಲವು ಹೆಕ್ಟೇರುಗಳಿಂದ ಲಕ್ಷಾಂತರ ಚದುರ ಕಿಲೋಮೀಟರ್ ವರೆಗೆ ಪ್ರಾಕೃತಿಕ ಆಕೃತಿಯನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ. ಒಂದು ಕಿರು ಜಲಾನಯನವು ಸುಮಾರು 500 ಹೆ ಪ್ರದೇಶವನ್ನೊಳಗೊಂಡಿರುತ್ತದೆ.
- ಜಲಾನಯನ ನಿರ್ವಹಣೆ ಎಂದರೇನು?
ಜಲಾನಯನ ನಿರ್ವಹಣೆ ಎಂದರೆ ಒಂದು ಭೌಗೋಳಿಕ ಪ್ರದೇಶದ ಬಸಿಯುವ ಪ್ರದೇಶದಲ್ಲಿನ ಭೂಮಿ, ಸಸ್ಯ ಸಂಪತ್ತು ಮತ್ತು ನೀರನ್ನು ಅಲ್ಲಿನ ವಾಸಿಗಳ ಅನುಕೂಲಕ್ಕೆ ಅದನ್ನು ರಕ್ಷಿಸುವುದು ಜಲ ಸಂರಕ್ಷಣಾ ಸೇವೆಯ ಉದ್ದೇಶ ಹಾಗೂ ಅದರ ಕೆಳ ಪ್ರದೇಶದಲ್ಲಿ ಉಂಟಾಗುವ ಅಂತರ್ಜಲಗಳ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಆ ಭೂ ಪ್ರದೇಶವನ್ನೇ ಸಮಗ್ರವಾಗಿ ಬಳಕೆ ಮಾಡುವುದು ಅಥವಾ ನಿರ್ವಹಣೆ ಮಾಡುವುದು ಎಂದರ್ಥ.
- ಭೂ ಸಂಪನ್ಮೂಲ ಮಾಹಿತಿ ಸಂಗ್ರಹಣೆ ಎಂದರೇನು?
ಭೂ ಸಂಪನ್ಮೂಲ ಮಾಹಿತಿ ಸಂಗ್ರಹಣೆ ಎಂದರೆ ಕ್ಷೇತ್ರ ಮಟ್ಟದಲ್ಲಿ ಮಣ್ಣು, ನೀರು, ಭೂ ಬಳಕೆ, ಹವಾಗುಣ ಮತ್ತು ಇತರೆ ವಿಷಯಗಳ ಸ್ಥಿತಿಯನ್ನು ಅಂದಾಜು ಮಾಡುವುದ ಹಾಗೂ ಬದಲಾವಣೆಯ ಸ್ಥಿತಿಯನ್ನು ಅಂದಾಜು ಮಾಡಿ ತಿಳಿದುಕೊಳ್ಳುವುದು. ಭೂ.ಸಂ.ಮಾ ಸಂಗ್ರಹಣೆಯು ಗ್ರಾಮ ಮಟ್ಟದಲ್ಲಿ, ಸ್ಥಳ ನಿರ್ಧಿಷ್ಟ ಭೂಸಂಪನ್ಮೂಲ ಮಾಹಿತಿಯನ್ನು ಒದಗಿಸುತ್ತದೆ.
- ಭೂ ಸಂಪನ್ಮೂಲ ಮಾಹಿತಿ ಸಂಗ್ರಹಣೆಯ ಪ್ರಾಮುಖ್ಯತೆ ಏನು?
ಕ್ಷೇತ್ರ ಮಟ್ಟದಲ್ಲಿ, ಭೂಸಂಪನ್ಮೂಲವು ಒಂದೇ ಸಮಾನ ರೀತಿಯಲ್ಲಿರುವುದಿಲ್ಲ. ಸಂಬಂಧಿತ ಇಲಾಖೆಗಳಿಂದ ಯಾವುದೇ ಸ್ಥಳ ನಿರ್ಧಿಷ್ಟ ಕಾರ್ಯ ಕೈಗೊಳ್ಳಬೇಕೆಂದರೂ ಕ್ಷೇತ್ರ ಮಟ್ಟದಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು ಮತ್ತು ಒಂದೇ ರೀತಿಯ ಪ್ರದೇಶಗಳನ್ನು ಒಂದೇ ನಿರ್ವಹಣಾ ಘಟಕವನ್ನಾಗಿ ವರ್ಗಿಕರಿಸುವುದು ನಿರ್ಣಾಯಕವಾಗಿರುತ್ತದೆ. ಭೂಸಂಪನ್ಮೂಲ ಮಾಹಿತಿಯು ಜಲಾನಯನ ಅಥವಾ ಕ್ಷೇತ್ರ ಮಟ್ಟದಲ್ಲಿ ಭೂಸಂಪನ್ಮೂಲ ನಿರ್ವಹಣೆ ಮಾಡಲು, ಬಳಕೆಗೆ ಸಿದ್ಧವಾದ ನಕ್ಷೆಗಳು, ಉದ್ದೇಶ ಪೂರ್ಣ ಫಲಿತಾಂಶಗಳು, ವರದಿಗಳು, ಅಟ್ಲಾಸ್, ನಿರ್ಧಾರ ಬೆಂಬಲ ವ್ಯವಸ್ಥೆ ಮತ್ತು ಸಲಹೆಗಳನ್ನು ಒದಗಿಸುತ್ತದೆ.
- ಜಲಾನಯನ ಅಭಿವೃದ್ಧಿಯು ಅತಿ ಮುಖ್ಯವಾಗಿದೆ ಏಕೆ?
ಮಾನವ ಹಾಗೂ ಅವನಿರುವ ಪರಿಸರ ಪರಸ್ಪರ ಅವಲಂಬಿತವಾಗಿವೆ. ಪರಿಸರದಲ್ಲಾಗುವ ಬದಲಾವಣೆಗಳು ಅದರ ಮೇಲೆ ಅದರಿಸಿರುವ ಜನ ಜೀವನದ ಮೇಲೆ ನೇರವಾಗಿ ಪರಿಣಾಮ ಉಂಟಾಮಾಡಲಿದೆ. ಅವನತಿ ಹೊಂದಿದ ಪರಿಸರವೆಂದರೆಅವನತಿ ಹೊಂದಿದ ಗುಣಮಟ್ಟದ ಜನಜೀವನ. ಪರಿಸರ ಅವನತಿಯನ್ನು, ಜಲಾನಯನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಮೂಲಕ ತಡೆಗಟ್ಟಬಹುದು. ಒಂದು ಜಲಾನಯನವು ಯಾವುದೇ ಅಭಿವೃದ್ಧಿ ಯೋಜನೆ ಪ್ರಾರಂಭಿಸಲು ಒಂದು ಪ್ರಾಕೃತಿಕ ಭೂ- ಜಲವಿಜ್ಞಾನ ಘಟಕವನ್ನು ಒದಗಿಸುತ್ತದೆ.
- ಡಿಜಿಟಲ್ ಲೈಬ್ರರಿ ಎಂದರೇನು?
ಭೂ ಸಂಪನ್ಮೂಲ ಮಾಹಿತಿಯ ಡಿಜಿಟಲ್ ಲೈಬ್ರರಿಯು, ರಾಜ್ಯದ ದೈಶಿಕ ಮತ್ತು ದೈಶಿಕೆ ತರ ಎರಡೂ ದತ್ತಾಂಶಗಳನ್ನು ಮತ್ತು ನಕ್ಷೆಗಳನ್ನು ವಿವಿಧ ಅಳತೆಗಳಲ್ಲಿ ಮತ್ತು ರೆಸೆಲ್ಯೂಷನ್ ನಕ್ಷೆಗಳ ಸಂಗ್ರಹಣಾ ಸ್ಥಳವಾಗಿದೆ.
- ರಾಜ್ಯದ ಎಲ್ಲಾ ಪ್ರದೇಶಗಳಿಗೂ ಭೂ ಸಂಪನ್ಮೂಲ ಮಾಹಿತಿ ಲಭ್ಯವಿದೆಯೆ?
ಹಾಲಿ ರಾಜ್ಯದ 11 ಜಿಲ್ಲೆಗಳಲ್ಲಿ 14 ಲಕ್ಷ ಹೆಕ್ಟೇರುಗಳನ್ನು ಒಳಗೊಂಡ 2534 ಕಿರುಜಲಾನಯನಗಳ ಭೂ ಸಂಪನ್ಮೂಲ ಮಾಹಿತಿಯು ಮಾತ್ರ ಸದ್ಯದಲ್ಲಿ ಲಭ್ಯವಿದೆ. ಇತರೆ ಪ್ರದೇಶದ ಭೂ ಸಂಪನ್ಮೂಲ ಮಾಹಿತಿ ಲಭ್ಯವಿರುವುದಿಲ್ಲ. ಭೂ ಸಂಪನ್ಮೂಲ ಮಾಹಿತಿ ಪೋರ್ಟಲ್ ನಲ್ಲಿ ಭೂ ಸಂಪನ್ಮೂಲ ಮಾಹಿತಿ ನಕ್ಷೆಗಳನ್ನು ಬಳಕೆದಾರರು ಪರಿಶೀಲಿಸಿ ಆ ಪ್ರದೇಶದ ಮಾಹಿತಿ ತಿಳಿದುಕೊಳ್ಳಬಹುದು.
- ನಿರ್ಧಾರ ಬೆಂಬಲ ವ್ಯವಸ್ಥೆ ಎಂದರೆನು?
ವಿಷಯ ಪರಿಣಿತರು ಭಾಗವಹಿಸುವಿಕೆಯ ಮುಖಾಂತರ ಅಭಿವೃದ್ಧಿ ಪಡಿಸಲಾಗಿರುವ ಒಂದು ಪರಿಣಿತ ವ್ಯವಸ್ಥೆಯಾಗಿದ್ದು, ಇದರಿಂದ ಜಲಾನಯನ ಮತ್ತು ಇತರೆ ಸಂಬಂಧಿತ ಇಲಾಖೆಗಳು, ಯೋಜನಾ ರೂಪಕರು, ರೈತರು ಇತರೆ ಬಳಕೆದಾರರಿಗೆ ಮಣ್ಣು ಮತ್ತು ನೀರು ಸಂರಕ್ಷಣೆ, ಬೆಳೆ ಆಯ್ಕೆ, ಪೋಷಕಾಂಶ ನಿರ್ವಹಣೆ ಇತ್ಯಾದಿಗಳಿಗೆ ಸಲಹೆಗಳನ್ನು ಒದಗಿಸುತ್ತದೆ.
- ಎಲ್ಲರಿಗೂ ಭೂ ಸಂಪನ್ಮೂಲ ಮಾಹಿತಿ ಲಭ್ಯವಾಗುತ್ತದೆಯೆ?
ಹೌದು, ರಾಜ್ಯದಲ್ಲಿ ಎಲ್ಲರಿಗೂ ಇದು ಲಭ್ಯವಾಗಲಿದೆ
- ನಾನು ನನ್ನ ಜಮೀನಿನ ಭೂ ಸಂಪನ್ಮೂಲ ಮಾಹಿತಿ ಮತ್ತು ಸಲಹೆಗಳನ್ನು ಹೇಗೆ ಪಡೆಯಬಹುದು?
ಅಂತರ್ಜಾಲ ಸೌಲಭ್ಯ ಇರುವಲ್ಲಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು sujala3lri.karnataka.gov.in ಲಾಗಿನ್ ಆಗಿ ಅಥವಾ ಮೊಬೈಲ್ ಬಳಸಿ ರೈತರು ಮಾಹಿತಿಯನ್ನು ಮತ್ತು ಸಲಹೆಗಳನ್ನು ಪಡೆಯಬಹುದು.
- ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಎಂದರೇನು?
ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯು (IWMP) ಮತ್ತು ಜಲಾನಯನದಲ್ಲಿನ ಭೂ ಮಾಲೀಕರು, ಸರ್ಕಾರಗಳು ಯೋಜಕರು ಮತ್ತು ಜಲಾನಯನದ ಇತರೆ ಬಳಕೆದಾರರು ಉಪಯೋಗಿಸಬಹುದಾದ ಮಾರ್ಗದರ್ಶನ ದಾಖಲೆಯಾಗಿದೆ. ಇದು ಜಲಾನಯನ ಪ್ರದೇಶದ ಭೂ ಮತ್ತು ಜಲ ಸಂಪನ್ಮೂಲಗಳ ದೀರ್ಘಕಾಲಿಕ ನಿರ್ವಹಣೆಗಾಗಿ ಸಾಮಾನ್ಯಗುರಿ ಮತ್ತು ಉದ್ದೇಶಗಳನ್ನು ಹೊಂದಿರುತ್ತದೆ.
- ಜಲಾನಯನ ಅಭಿವೃದ್ಧಿ ಎಂದರೇನು?
ಜಲಾನಯನ ಅಭಿವೃದ್ಧಿ ಎಂದರೆ ಜಲಾನಯನ ಪ್ರದೇಶದಲ್ಲಿ ಸಂರಕ್ಷಣಾ ಪುನರ್ ನಿರ್ಮಾಣ ಮತ್ತು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯಗಳು, ಪ್ರಾಣಿಗಳು ಮತ್ತು ಮಾನವ ಸಂಪನ್ಮೂಲದ ನ್ಯಾಯಯುತ ಬಳಕೆಗೆ ಸಂಬಂಧಿಸಿದ್ದಾಗಿದೆ. ಜಲಾನಯನ ನಿರ್ವಹಣೆಯು ಒಂದೆಡೆ ನೈಸರ್ಗಿಕ ಸಂಪನ್ಮೂಲಗಳ ಮತ್ತು ಮತ್ತೊಂದೆಡೆ ಮಾನವ ಹಾಗೂ ಪ್ರಾಣಿಗಳ ನಡುವೆ ಪರಿಸರದಲ್ಲಿ ಅತ್ಯತ್ತಮ ಸಮತೋಲನವನ್ನು ತರಲು ಯತ್ನಿಸುತ್ತದೆ. ಪರಿಸರ ಅವನತಿಯಾಗಲು ಮಾನವನೇ ಮೂಲ ಕಾರಣವಾಗಿರುವುದರಿಂದ ಪುನರ್ ನಿರ್ಮಾಣ ಮತ್ತು ಸಂರಕ್ಷಣೆಯು ಜಲಾನಯನ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನತೆಯಲ್ಲಿ ಜಾಗೃತಿ ಮೂಡಿಸುವುದು ಮತ್ತು ಭಾಗವಹಿಸುವಿಕೆಯನ್ನು ವೃದ್ಧಿಮಾಡುವ ಮೂಲಕ ಮಾತ್ರ ಸಾಧ್ಯವಾಗುವುದು.